ಭೂಮ್ತಾಯಿ ಬಳಗದ ಹಾಡಿನ ಮಡಿಲಲ್ಲಿ…

ಪ್ರೇರಣ ಸಂಸ್ಥೆಯು ದಿನಾಂಕ: ೦೧/೦೯/೨೦೧೭ ರಂದು ಭಾಷಾ ಸಪ್ತಾಹದ ಮುಕ್ತಾಯ ಸಮಾರಂಭವನ್ನುಹಮ್ಮೆಕೊಂಡಿತ್ತು.  ಈ ಕಾರ್ಯಕ್ರಮಕ್ಕೆ ಭೂಮ್ತಾಯಿ ಬಳಗ ಎಂಬ ಬೆಂಗಳೂರಿನ ಸುಪ್ರಸಿದ್ಧ ಜನಪದ ವಾದ್ಯವೃಂದವನ್ನು ಆಹ್ವಾನಿಸಲಾಗಿತ್ತು.  ಈ ತಂಡದವರು ಜಾಗತೀಕರಣದಿಂದ ಆಗುತ್ತಿರುವ ಪರಿಸರ ನಾಶ ಮತ್ತು ಆಧುನಿಕ ಮಾನವ ಜೀವನ ಶೈಲಿಯ ಬಗ್ಗೆ ಹಾಡುಗಳನ್ನು ಹಾಡಿದರು. ತಮ್ಮ ಹಾಡುಗಳ ಮೂಲಕವೇ ನಮ್ಮ ನಾಡಿನಲ್ಲಿ ನಶಿಸಿಹೋಗುತ್ತಿರುವ ಜಲ, ಮಣ್ಣು, ಪಕ್ಷಿ-ಪ್ರಾಣಿ ಮತ್ತು ಭಾಷಾ ಪ್ರೇಮದ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಇವರು ತಮಟೆ, ಜಂಬೆ ಮತ್ತು ಡೋಲಿನ ನಾದದಲ್ಲಿ ಹಾಡಿದ ಹಾಡು ಬಹಳ ರಂಜನೀಯವಾಗಿತ್ತು.

ಮೊದಲಿಗೆ, ಇವರು ನಮ್ಮ ನಾಡಿನಲ್ಲಿ ಒಣಗಿ, ಬರದಾಗಿ ಹೋಗುತ್ತಿರುವ ನದಿಗಳ ಶೋಚನೀಯ ಸ್ಥಿತಿಯ ಬಗ್ಗೆ ಹಾಡುತ್ತಾ, ಅವುಗಳನ್ನು ರಕ್ಷಿಸುವ ಜವಾಬ್ಧಾರಿ ನಮ್ಮದ್ದಾಗಿದೆ ಎಂಬ ಸಂದೇಶ ನೀಡಿದರು.  ಇದರ ಜೊತೆಯಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ ಹೇಗೆ ನಾವು  ಅರಣ್ಯ ಹಾಗು ಅನೇಕ ಜಾತಿಯ ಪಕ್ಷಿಗಳನ್ನು ನಾಶ ಮಾಡುತ್ತಿದ್ದೆವೆ ಎಂಬುದರ  ಬಗ್ಗೆ ಅರಿವನ್ನು ಮೂಡಿಸಿದರು.  ನಂತರ, ನಮ್ಮ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನ ಅನೇಕ ಸ್ಥಳಗಳು ಬದಲಾಗುತ್ತ ಹೇಗೆ ತನ್ನ ವಿಶೇಷತೆಯನ್ನು ಕಳೆದುಕೊಳ್ಳುತಿದೆ ಎಂಬುದರ ಬಗ್ಗೆ ಹಾಡಿದರು.  ಮುಂದೆ ತಂಡವು ವಿದೇಶಿ ಪಾನೀಯಗಳು ನಮ್ಮ ನಾಡಿನಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳುತ್ತ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದರ ಜೊತೆಗೆ ನಮ್ಮ ದೇಸಿ ಪಾನೀಯಗಳ ಅಳಿವಿಗೆ ಮುಖ್ಯ ಕಾರಣವಾಗುತ್ತಿದೆ ಎಂಬುದರ ಬಗ್ಗೆ ಅರಿವು ಮೂಡಿಸಿದರು.  ಕೊನೆಯಲ್ಲಿ, ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ನಾವು ಇಂದು ಇದ್ದು ನಾಳೆ ಹೋಗುವವರು.  ನಮ್ಮ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾಶ ಮಾಡುವುದು ಸರಿಯಲ್ಲ.  ನಮ್ಮ ಮುಂದಿನ ಪೀಳಿಗೆಗೆ ಅವಶ್ಯಕವಾದ ಜಲ, ಮಣ್ಣು, ಓಳ್ಳೆಯ ಗಾಳಿ ಮತ್ತು ಸುಂದರ ಪ್ರಕೃತಿಯನ್ನು ನಾಶ ಮಾಡದೆ ಬಿಟ್ಟು ಹೋಗುವುದು ನಮ್ಮ ಕರ್ತವ್ಯ ಎಂಬ ಸಂದೇಶ ನೀಡಲೆಂದು “ಎಲ್ಲ ಮಾಯ ನಾಳೆ ನಾವು ಮಾಯ” ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.

ಭೂಮ್ತಾಯಿ ಬಳಗ ತಂಡದವರು ನಮ್ಮ ಕಾಲೇಜಿನಲ್ಲಿ ನಿರಂತರವಾಗಿ ಒಂದೂವರೆ ಗಂಟೆಗಳ ಕಾಲ ಉತ್ಸಾಹದ ಪ್ರದರ್ಶನ ನೀಡಿದರು.  ಅವರ ಹಾಡುಗಳ ಮೂಲಕ ವಿದ್ಯಾರ್ಥಿಗಳಾದ ನಮಗೆ ಪರಿಸರದ ರಕ್ಷಣೆಯ ಬಗ್ಗೆ ಒಳ್ಳೆಯ ಅರಿವು ಮೂಡಿತು.  ಅವರ ಹಾಡುಗಳಿಗೆ ಎಲ್ಲ ಪ್ರೇಕ್ಷಕರು  ಮೆಚ್ಚುಗೆ ವ್ಯಕ್ತಪಡಿಸಿದರು.

 

ದೀಕ್ಷಾ. ಎಂ.

2 CAMS J

 

Advertisements
This entry was posted in Prerana. Bookmark the permalink.

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s