ಕ್ರೈಸ್ತ ಕಾಲೇಜಿನ ಚರ್ಚಾ ಚತುರೆಯರು

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು

ಹೀಗೆಂದು ೧೨ ನೇ ಶತಮಾನದ ಕ್ರಾಂತಿಕಾರಿ ಸಮಾಜ ಸುಧಾರಕ ಬಸವಣ್ಣನವರು ಹೇಳಿದ್ದಾರೆ.ಮಾತಿಗಿರುವ ಶಕ್ತಿಯೇ ಅಂಥದ್ದು. ಮಾತು ಬಲ್ಲವನು ಲೋಕವನ್ನೇ ಗೆಲ್ಲಬಲ್ಲ. ಈ ಸೂತ್ರವನ್ನು ಚೆನ್ನಾಗಿ ಅರಿತ ನಮ್ಮ ಕ್ರೈಸ್ತ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿನಿಯರು ಸ್ಪರ್ಧಿಸಿದ ಎಲ್ಲ ಚರ್ಚಾ ಸ್ಪರ್ಧೆಯಲ್ಲಿ ಪಾರಿತೋಷಕವನ್ನು ಗೆದ್ದದ್ದು ಹೆಮ್ಮೆಯ ವಿಷಯ.

ಟಿ.ಆರ್.ಶಾಮಣ್ಣನವರ ಸ್ಮರಣೆಯಲ್ಲಿ, ದಿನಾಂಕ 30-08-2017 ರಂದು ವಿ.ಎಸ್.ಕೃಷ್ಣಯ್ಯರ್ ಪದವಿ ಪೂರ್ವ ಕಾಲೇಜಿನವರು ಏರ್ಪಡಿಸಿದ್ದ ಚರ್ಚಾಸ್ಫರ್ದೆಯಲ್ಲಿ 1 CAMS Kನ ವಿದ್ಯಾರ್ಥಿನಿಯಾದ ದಿವ್ಯ ಶ್ರೀ.ಎಸ್. ದ್ವಿತೀಯ ಬಹುಮಾನವನ್ನು ಪಡೆದರೆ, 2 CAMS Kನ ವಿದ್ಯಾರ್ಥಿನಿಯಾದ ಪೂಜ.ಎನ್. ತೃತೀಯ ಬಹುಮಾನ ಪಡೆಯವುದರ ಮೂಲಕ ಇಬ್ಬರೂ ಭಾಗವಹಿಸಿದ ಮೊದಲನೇ ಸ್ಫರ್ದೆಯಲ್ಲಿ ಪಾರಿತೋಷಕವನ್ನು ಗೆದ್ದು ಕ್ರೈಸ್ತ ಕಾಲೇಜಿನ ಕೀರ್ತಿ ಕಿರೀಟಕ್ಕೆ ಮತ್ತೊಂದು ಮುತ್ತನ್ನೇರಿಸಿದರು. ನಂತರ ನ್ಯಾಷನಲ್ ಕಾಲೇಜಿನಲ್ಲಿ 23-09-2017 ರಂದು ಏರ್ಪಡಿಸಿದ್ದ ಕು.ವನಿತಾ ಸ್ಮಾರಕ ರಾಜ್ಯಮಟ್ಟದ ಚರ್ಚಾಸ್ಫರ್ದೆಯಲ್ಲಿ ದಿವ್ಯ ಶ್ರೀ. ಎಸ್. ಸಮಾಧಾನಕರ ಬಹುಮಾನ ಗಳಿಸಿದಳು. ಇದರ ಜೊತೆಗೆ ಬಿ.ಇ.ಎಸ್.ಪದವಿ ಪೂರ್ವ ಕಾಲೇಜಿನಲ್ಲಿ 26-09-2017 ರಂದು ನಡೆದ ರಾಷ್ಟ್ರಕವಿ ಕುವೆಂಪು ಸ್ಮಾರಕ ರಾಜ್ಯಮಟ್ಟದ ಚರ್ಚಾಸ್ಫರ್ದೆಯಲ್ಲಿ ಪೂಜ.ಎನ್. ದ್ವಿತೀಯ ಬಹುಮಾನವನ್ನು ತನ್ನದಾಗಿಸಿಕೊಂಡಳು.

ಹೀಗೆ ಈ ಇಬ್ಬರೂ ವಿದ್ಯಾರ್ಥಿನಿಯರು ಭಾಗವಹಿಸಿದ ಎಲ್ಲ ಸ್ಫರ್ದೆಗಳಲ್ಲಿಯೂ ನಮ್ಮ ಕಾಲೇಜಿನ ಕೀರ್ತಿ ಪತಾಕೆಯನ್ನು ಇನ್ನೂ ಎತ್ತರಕ್ಕೆ ಹಾರಿಸುವ ಮೂಲಕ ಕ್ರೈಸ್ತ ಕಾಲೇಜಿನ ಚರ್ಚಾಸ್ಫರ್ದೆಯ ರಾಯಭಾರಿಗಳಾಗಿದ್ದಾರೆ.

ಪ್ರೇರಣ ಸಂಘದ ಪರವಾಗಿ ಇವರಿಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು. ಇವರ ಈ ಪ್ರತಿಭೆ ಮತ್ತಷ್ಟು ವೃದ್ಧಿಸಲಿ ಮತ್ತು ಭವಿಷ್ಯದಲ್ಲಿ ಉನ್ನತ ಶಿಖರಗಳನ್ನು ಏರಲಿ ಎಂಬುದು ನಮ್ಮೆಲ್ಲರ ಆಶಯ.

This entry was posted in Prerana. Bookmark the permalink.

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s