ಕನ್ನಡ ರಸಪ್ರಶ್ನೆ ಸ್ಪರ್ಧೆ

     ಪ್ರೇರಣ ಸಂಸ್ಥೆಯು, ನಮ್ಮ ಕಾಲೇಜಿನ ಕ್ವಿಜ್ ಸಂಸ್ಥೆಯಾದ ಸೆಡೆಸ್ ಮಿನರ್ವದ ಸಹಯೋಗದೊಂದಿಗೆ ೩ ನವಂಬರ್ ೨೦೧೭ ರಂದು ನಮ್ಮ ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಕನ್ನಡ ರಸಪ್ರಶ್ನೆ  ಸ್ಪರ್ಧೆಯನ್ನು ಆಯೋಜಿಸಿತ್ತು.  ಈ ಸ್ಪರ್ಧೆಯನ್ನು ನಮ್ಮದೇ ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಕಳೆದ ವರ್ಷದ ಪ್ರೇರಣ ಸಂಸ್ಥೆಯ ಪ್ರೆಸಿಡೆಂಟ್ ಆದ ತೇಜಸ್ ಕೆ.ವಿ. ರವರು ನಡೆಸಿಕೊಟ್ಟರು.  ಈ ಸ್ಪರ್ಧೆಗೆ ಎಲ್ಲ ವಿಭಾಗದ ವಿಧ್ಯಾರ್ಥಿಗಳಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು.

ಈ ಸ್ಪರ್ಧೆಗೆ ವಿಧ್ಯಾರ್ಥಿಗಳು ಇಬ್ಬಿಬ್ಬರ ತಂಡವನ್ನು ರಚಿಸಿಕೊಂಡು ಭಾಗವಹಿಸಬೇಕಿತ್ತು.  ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ತಂಡಗಳು ಸೇರಿದ್ದ ಕಾರಣ, ಸ್ಪರ್ಧೆಯ ಪೂರ್ವಭಾಗವಾಗಿ ಒಂದು ಲಿಖಿತ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು.  ಈ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯದ ಮೊದಲವುಗಳು, ಕನ್ನಡದ ಕವಿಗಳು, ನಮ್ಮ ಕರ್ನಾಟಕ ರಾಜ್ಯದ ಪ್ರಸಿದ್ಧ ಸ್ಥಳಗಳು ಮುಂತಾದವುಗಳ ಬಗ್ಗೆ ಒಟ್ಟು ಹದಿನಾರು ಪ್ರಶ್ನೆಗಳನ್ನೂ ಕೇಳಲಾಗಿತ್ತು.  ಈ ಪರೀಕ್ಷೆಯ ಫಲಿತಾಂಶದ ಅನುಸಾರ ಕೊನೆಯ ಹಂತದ ರಸಪ್ರಶ್ನೆಗೆ ಒಟ್ಟು ಐದು ತಂಡಗಳನ್ನು ಆಯ್ಕೆ ಮಾಡಲಾಯಿತು.

ಕೊನೆಯ ಹಂತದ ರಸಪ್ರಶ್ನೆ ಸ್ಪರ್ಧೆಯಲ್ಲಿ ಒಟ್ಟು ಏಳು ಸುತ್ತುಗಳಿದ್ದವು.   ಪ್ರತೀ ಸುತ್ತಿನಲ್ಲೂ ಎಲ್ಲ ತಂಡಗಳಿಗೂ ಪ್ರತ್ಯೇಕವಾಗಿ ಬೇರೆ-ಬೇರೆ ಪ್ರಶ್ನೆಗಳನ್ನು ಕೇಳಲಾಗುತಿತ್ತು.  ಒಂದು ತಂಡವು ಉತ್ತರಿಸದ ಪ್ರಶ್ನೆಗಳು ಇನ್ನೊಂದು ತಂಡದಕ್ಕೆ ವರ್ಗಾವಣೆ ಆಗುತಿರಲಿಲ್ಲ.  ಪ್ರತಿ ಸರಿ ಉತ್ತರಕ್ಕೆ ಹೆಚ್ಚುವರಿ ಹತ್ತು ಅಂಕಗಳನ್ನು ನೀಡಲಾಗುತ್ತಿತ್ತು.  ಕೆಲವು ಸುತ್ತಿನಲ್ಲಿ ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳೂ ಇದ್ದವು.

ಒಂದು ಸುತ್ತಿನಲ್ಲಿ ನಮ್ಮ ಬೆಂಗಳೂರು ಜಿಲ್ಲೆಯ ಹಲವು ಪ್ರಸಿದ್ಧ ಭವನಗಳ ಮತ್ತು ಪ್ರತಿಮೆಗಳ ಚಿತ್ರಗಳನ್ನು ತೆರೆಯ ಮೇಲೆ ಪ್ರದರ್ಶಿಸಲಾಗುತಿತ್ತು.  ಸ್ಪರ್ಧಿಗಳು ತಮ್ಮ ತಂಡಕ್ಕೆ ಪ್ರದರ್ಶಿಸಿದ ಚಿತ್ರದಲ್ಲಿರುವ ಭವನ, ಪ್ರತಿಮೆ, ಇತ್ಯಾದಿಗಳನ್ನು ಸರಿಯಾಗಿ ಗುರುತಿಸಬೇಕಿತು.  ಇನೊಂದು ಸುತ್ತಿನಲ್ಲಿ, ಒಂದಕ್ಕೊಂದು ಸಂಭಂದವಿರುವ ನಾಲ್ಕರಿಂದ ಐದು ಚಿತ್ರಗಳನ್ನು ಪ್ರದರ್ಶಿಸಲಾಗುತಿತ್ತು.  ಸ್ಪರ್ಧಿಗಳು ಆ ಚಿತ್ರಗಳಿಗಿರುವ ಸಂಭಂದವನ್ನು ಕಂಡುಹಿಡಿದು ಅದನ್ನು ಹೇಳಬೇಕ್ಕಿತು.  ಮತ್ತೊಂದು ಸುತ್ತು, ‘ಚಟ್ ಪಟ್ ಚಿನಕುರಳಿ’(rapid fire). ಈ ಸುತ್ತಿನಲ್ಲಿ ಪ್ರತಿ ತಂಡಕ್ಕೂ ೧೫ ಸೆಕೆಂಡ್ ಸಮಯಾವಧಿ ನೀಡಲಾಗುತಿತ್ತು.  ನೀಡಿರುವ ಸಮಯಾವಧಿಯಲ್ಲಿ ಸ್ಪರ್ಧಿಗಳು ತಮ್ಮ ತಂಡಕ್ಕೆ ತೆರೆಯ ಮೇಲೆ  ಪ್ರದರ್ಶಿಸಿದ ಐದು ಪ್ರಶ್ನೆಗಳಲ್ಲಿ ತಮಗೆ ಕಚಿತವಿರುವ ಉತ್ತರಗಳನ್ನು ಬೇಗನೆ ಉತ್ತರಿಸಬೇಕಿತ್ತು.  ಈ ಸುತಿನಲ್ಲಿ ಪ್ರತಿ ತಪ್ಪು ಉತ್ತರಕ್ಕೆ ಐದು ಋಣಾತ್ಮಕ ಅಂಕಗಲಿದ್ದವು.  ಕೊನೆಯ ಸುತ್ತು ‘ಬಂಪರ್ ಸುತ್ತು’  ಎರಡು ಪದದ ಉತ್ತರವಿರುವ ಒಂದು ಪ್ರಶ್ನೆಯನ್ನು ಕೇಳಲಾಗುತಿತ್ತು.  ನಂತರ ಒಂದಾದ ಮೇಲೆ ಒಂದರಂತೆ, ಎರಡೂ ಪದಕ್ಕೂ ಸಂಭಂದಿಸಿದಂತೆ ಮೂರು ಸುಳುಹನ್ನು ನೀಡಲಾಗುತಿತ್ತು.  ಈ ಸುತ್ತಿನ ನಿಯಮದ ಅನುಸಾರ, ಯಾವುದೇ ಸುಳುಹನ್ನು ತೆಗೆದುಕೊಳ್ಳದೆ ಸರಿ ಉತ್ತರ ನೀಡಿದರೆ ೨೦ ಅಂಕ.  ಒಂದೊಂದು ಹೆಚ್ಚುವರಿ  ಸುಳುಹುಗಳನ್ನು ತಗೆದುಕೊಂಡಂತೆಲ್ಲ ಸರಿ ಉತ್ತರಕ್ಕೆ ೨೦ರಲ್ಲಿ ೫ ಅಂಕಗಳು ಇಳಿಯುತ್ತ ಹೋಗುತಿತ್ತು.  ಇವು ರಸಪ್ರಶ್ನೆ ಸ್ಪರ್ಧೆಯ ಕೆಲವು ಸುತ್ತುಗಳ ವಿವರಣೆ.  ಸ್ಪರ್ಧೆಯ ಕೊನೆಯಲ್ಲಿ, ಭಾಗವಹಿಸಿದ ಐದು ತಂಡಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಮೂರು ತಂಡಗಳನ್ನು ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನದ ವಿಜೇತರೆಂದು ಘೋಷಿಸಲಾಯಿತು.  ಮೂರು ತಂಡದ ವಿಜೆತರಿಗೂ ಪ್ರೇರಣ ಸಂಸ್ಥೆಯ ಮುಕ್ತಾಯ ಸಮಾರಂಭದಂದು ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಲಾಯಿತು.

ಒಟ್ಟಿನಲ್ಲಿ, ಈ ರಸಪ್ರಶ್ನೆ ಸ್ಪರ್ಧೆಯು ಹೊಸತಾದ ವಿಭಿನ್ನ ಸುತ್ತುಗಳಿಂದ ನೆರದಿದ್ದ ಎಲ್ಲ ಪ್ರೇಕ್ಷಕರಿಗೂ ಮತ್ತು ಸ್ಪರ್ಧಿಗಳಿಗು ಬಹಳ ಆನಂದ ಮತ್ತು ಮನರಂಜನೆಯನ್ನು ನೀಡಿತು.  ಎಲ್ಲರು ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಚಿತ್ರರಂಗ, ಮುಂತಾದವುಗಳ ಬಗ್ಗೆ ನಮಗೆ ತಿಳಿಯದ ಹಲವು ವಿಷಯಗಳನ್ನು ತಿಳಿದುಕೊಂಡೆವು.  ಈ ಸ್ಪರ್ಧೆಗಾಗಿ ಬಹಳಷ್ಟು ಶ್ರಮಪಟ್ಟು, ಪ್ರಶ್ನೆಗಳನ್ನು ಸಿದ್ಧಪಡಿಸಿ, ನಮಗಾಗಿ ಬಿಡುವು ಮಾಡಿಕೊಂಡು ಬಂದು, ಈ ಕಾರ್ಯಕ್ರಮವನ್ನು ಬಹಳ ಚೆನ್ನಾಗಿ ನಡೆಸಿಕೊಟ್ಟ ತೇಜಸ್. ಕೆ. ವಿ. ರವರಿಗೆ ನಾವೆಲ್ಲರೂ ಕೃತಜ್ಞರು.

  • ಹೇಮಂತ್. ವಿ.

2 CAMS J

Advertisements
This entry was posted in Prerana. Bookmark the permalink.

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s