Prerana Kannada Events

೨೩/೮/೧೯ ರಂದು ಪ್ರೇರಣಾ ಸಂಘವು ಉದಯೋನ್ಮುಖ ಕಲಾವಿದರಿಗೆ ಒಂದು ಒಳ್ಳೆಯ ವೇದಿಕೆಯನ್ನು ಒದಗಿಸಿಕೊಟ್ಟಿತು. ಚರ್ಚೆ,ಭಾವಗೀತೆ ಹಾಗು ಜಾನಪದ ಗೀತೆಗಳ ಸ್ಪರ್ಧೆಯನ್ನು ಅಂದು ಏರ್ಪಾಡಿಸಲಾಗಿತ್ತು .’ತಂತ್ರಜ್ಞಾನದಿಂದ ಸಂಬಂಧಗಳು ನಾಶಿಸುತ್ತದೆಯೇ ?’ ಎಂಬುದು ಚರ್ಚಯ ವಿಷಯವಾಗಿತ್ತು. ವಿದ್ಯಾರ್ಥಿಗಳು ತಮ್ಮ-ತಮ್ಮ ಅಭಿಪ್ರಾಯಗಳನ್ನು ಬಹಳ ಚೆನ್ನಾಗಿ ವ್ಯಕ್ತ ಪಡಿಸುತ್ತಾ ಹೋದರು. ಈ ಸ್ಪರ್ಧೆಗೆ ಪೂಜಾ.ಏನ್ ಹಾಗು ಹೇಮಂತ್.ವಿ ಅವರು ತೀರ್ಪುಗಾರರಾಗಿದ್ದರು. ಭಾವಗೀತೆ ಗಾಯನ ಸ್ಪರ್ಧೆಗೆ ತೀರ್ಪುಗಾರರಾಗಿ ಸೌಮ್ಯ ಹಾಗು ಅನಘಾರವರು ಉಪಸ್ಥಿತರಿದ್ದರು. ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿ ಪ್ರಮುಖ ಕವಿಗಳ ಕವಿತೆಗಳನ್ನು ಹಾಡಿ ಪ್ರಮುಖ ಸಂಗೀತ ಸಂಯೋಜನೆಗಳನ್ನು ಹಾಡಿದರು. ಈ ಸ್ಪರ್ಧೆಯಲ್ಲಿ ಕುಮಾರಿ ಸಿರಿ(೧ ‘o ‘) ಪ್ರಥಮ ಸ್ಥಾನವನ್ನು ಪಡೆದಳು. ಆ ದಿನದ ಕೊನೆಯ ಸ್ಪರ್ಧೆಯಾದ ಜಾನಪದ ಗೀತೆ ಗಾಯನದಲ್ಲಿ ತೀರ್ಪುಗಾರರಾಗಿ ಶ್ರೀ ಎ.ಡಿ.ಸುಮಧುರ್ ,ಶ್ರೀ ಉಜ್ಜ್ವಲ.ಕೆ.ಎಸ್ ಹಾಗು ವರ್ಷ.ಯು.ಎಸ್  ಅವರು ಆಗಮಿಸಿದ್ದರು. ಸ್ಪರ್ಧಿಗಳೆಲ್ಲರೂ ಜಾನಪದದ ಲೋಕವನ್ನೇ ಸೃಷ್ಟಿಸಿದರು. ಈ ಸ್ಪರ್ಧೆಯಲ್ಲಿ ದೀಪಕ್(೨ ‘k ) ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ೨೦/೮/೧೯ರಂದು ಅಂತ್ಯಾಕ್ಷರಿ ಸ್ಪರ್ಧೆಯನ್ನು ಏರ್ಪಡಿಸಲಾಗಿತು. ಆ ಸ್ಪರ್ಧೆಗೆ  ದಿವ್ಯಶ್ರೀ . ಎಸ ಹಾಗು ಅರ್ಪಿತಾ ಹೆಚ್.ಬಿ ಅವರು ತೀರ್ಪುಗಾರರಾಗಿದ್ದರು. ಈ ಸ್ಪರ್ಧೆಯನ್ನು ಬೇರೆ-ಬೇರೆ ಕುತೂಹಲಕರವಾದ ಹಂತಗಳಲ್ಲಿ ನಡೆಸಿದರು. ಈ ಸ್ಪರ್ಧೆಯಲ್ಲಿ ವರ್ಷ(೨ ‘a ‘) ಮತ್ತು ತಂಡ ಪ್ರಥಮ ಸ್ಥಾನ ಪಡೆದು ಯಶಸ್ವಿಯಾದರು. ಹೀಗೆ ಎರಡು ದಿನಗಳ ಕಾಲ ಸ್ಪರ್ಧೆಗಳು ಯಶಸ್ವಿಯಾಗಿ, ಸೊಗಸಾಗಿ ಮೂಡಿಬಂದವು.

IMG-20191013-WA0015IMG-20191013-WA0014IMG_20190823_155824

 

-ವಾರುಣಿ ಶಾಸ್ತ್ರಿ

೧ HEPP ‘N ‘

This entry was posted in Prerana. Bookmark the permalink.

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s