ಪೂರ್ಣಚಂದ್ರ ತೇಜಸ್ವಿಯವರ ಬದುಕು ಹಾಗು ಸಾಹಿತ್ಯ

ದಿನಾಂಕ ೧೮/೧೦/೨೦೧೯ ರಂದು ನಮ್ಮ ಕಾಲೇಜಿನಲ್ಲಿ ಭಾಷಾ ವಿಭಾಗದ ಪ್ರಧ್ಯಾಪಕರು ವಿದ್ಯಾರ್ಥಿಗಳಿಗಾಗಿ ರಸ ಋಷಿ ಕುವೆಂಪುರವರ ಹಿರಿಯ ಪುತ್ರ, ಲೇಖಕ, ಶಾಲಾಗ್ರಾಹಕ ಪರಿಸರಪ್ರೇಮಿ ಪೂರ್ಣಚಂದ್ರ ತೇಜಸ್ವಿಯವರ ಬದುಕು ಹಾಗು ಸಾಹಿತ್ಯದ ಕುರಿತು ಪರಿಚಯಿಸಿಕೊಡಲು ಅದ್ಭುತ ಮಾತುಗಾರರಾದ ಡಾ।। ಹೆಚ್. ಸತ್ಯನಾರಾಯಣರವರನ್ನು ಕರೆಸಿದ್ದರು. ಡಾ।। ಹೆಚ್. ಸತ್ಯನಾರಾಯಣರವರು ಪೂರ್ಣಚಂದ್ರ ತೇಜಸ್ವಿಯವರನ್ನು ಹತ್ತಿರದಿಂದ ಕಂಡವರಾಗಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ನಮ್ಮ ಕಾಲೇಜಿನ  ಕನ್ನಡ ಉಪನ್ಯಾಸಕರಾದ ಶ್ರೀಮತಿ ವನಿತ ಅವರು ವಹಿಸಿಕೊಂಡಿದ್ದರು. ವಿದ್ಯಾರ್ಥಿಗಳು ತಯಾರಿಸಿದ್ದ ಪೂರ್ಣಚಂದ್ರ ತೇಜಸ್ವಿಯವರ ಕುರಿತು ಸಣ್ಣ ಚಿತ್ರಣವನ್ನು ನಮಗೆಲ್ಲಾ ತೋರಿಸಲಾಯಿತು. ನಂತರ ಭಾಷಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಾಗರತ್ನ ಅವರು ಎಲ್ಲರಿಗೂ ಸ್ವಾಗತವನ್ನು ಕೋರಿದರು. ಅನಂತರ ಡಾ।। ಹೆಚ್. ಸತ್ಯನಾರಾಯಣರವರು ಮಾತನಾಡಲು ಪ್ರಾರಂಭಿಸಿದರು.

ಸತ್ಯನಾರಾಯಣರವರು ಪೂ.ಚಂ.ತೇ ಅವರು ಬರೆದಿರುವ “ಅಣ್ಣನ ನೆನಪು” ಎಂಬ ಆತ್ಮಕಥನವನ್ನು ಆಧರಿಸಿ ಅವರ ಕುರಿತು ಹೇಳಿದ್ದರು. ಅವರ ಮಾತಿನಲ್ಲಿ ತೇಜಸ್ವಿಯವರ ಹುಟ್ಟಿನಿಂದ ಕುವೆಂಪುರವರಿಗೆ ಆದ ಆನಂದ, ಸಂತಸ ಅವರು ರಚಿಸಿದ ಪದ್ಯಗಳ ಬಗ್ಗೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಶೇಷ ಚಿತ್ರಣ ಮೂಡಿತು. ನಂತರ ಆಶ್ಚರ್ಯವೇನೆಂದರೆ ಮಹಾಕವಿಯ ಮಗನಾಗಿದ್ದರು ಅವರು ಅತಿ ತುಂಟರಾಗಿದ್ದರು ಎಂಬುವುದು. ಇದಕ್ಕೆ ಸಾಕ್ಷಿಯಾಗಿ “ಪೆಂಡ್ಯುಲಮ್ ಬಾಲದ” ನಾಯಿಯ ಕಥೆ, ಮನೆಗೆ ತಂದ ಹೊಸ ನಾಯಿ ತುಂಟನಾದ ಕಥೆ ಹಾಗು ಸರ್ಕಾರಿ ಶಾಲೆಯಿಂದ ಅರ್ಧದಲ್ಲೆ ಓಡಿ ಬಂಡ ಕಥೆಯನ್ನು ಹೇಳಿದರು. ನಂತರ ತೇಜಸ್ವಿಯವರ ಕಾಲೇಜಿನ ಜೀವನ, ಓದಿನ ನಂತರ ಅವರು ಮೂಡಿಗೆರೆಗೆ ಬಂದ ಕಾರಣ, ಅವರ ಅಲ್ಲಿನ ಜೀವನವನ್ನು ವಿವರಿಸಿದರು.

ಪರಿಸರ ಪ್ರೇಮಿಯಾದ ತೇಜಸ್ವಿಯವರು ಹಲವಾರು ವೈಜ್ಞಾನಿಕ ಲೇಖನಗಳು, ಪರಿಸರದ ಕುರಿತು ಕೃತಿಗಳನ್ನು ರಚಿಸಿದ್ದಾರೆ. ಅವರ ಮುಖ್ಯ ಕೃತಿಗಳು ಅಬಚೂರಿನ ಪೋಸ್ಟ್ ಆಫೀಸು, ಕಾರ್ವಾಲ, ಕಿರಗೂರಿನ ಗಯ್ಯಾಳಿಗಳು ಮೊದಲಾದವು. ಇವುಗಳನ್ನು ಓದಲು ವಿದ್ಯಾರ್ಥಿಗಳಲ್ಲಿ ವಿನಂತಿಸಿದರು. ಹೀಗೆ ತೇಜಸ್ವಿಯವರ ಬದುಕು ಹಾಗು ಸಾಹಿತ್ಯದ ಸಂಕ್ಷಿಪ್ತ ವಿವರವನ್ನು ನೀಡಿದರು. ಇಷ್ಟೇ ಅಲ್ಲದೆ ಪ್ರಶ್ನೋತ್ತರದ ಸಮಯದಲ್ಲಿ ಪರೀಕ್ಷೆಗೆ ನಡೆಸಬೇಕಾದ ತಯಾರಿ, ವಿದ್ಯಾರ್ಥಿಗಳಲ್ಲಿ ಇರಬೇಕಾದ ಸಾಹಿತ್ಯದ ಒಲವು ಹಾಗು ಕನ್ನಡ ಭಾಷೆಯನ್ನು ಬೆಳೆಸುವುದು ಹೇಗೆ ಎಂದು ತಿಳಿಸಿದರು. ಇವರಿಗೆ ವಿದ್ಯಾರ್ಥಿಗಳು ಹೃತ್ಪೂರ್ವಕವಾಗಿ ವಂದಿಸಿದರು. ಈ ಅದ್ಭುತ ಕಾರ್ಯಕ್ರಮಕ್ಕೆ ಬೇರೆ ಕಾಲೇಜಿನ ಶಿಕ್ಷಕರು ಸಹ ಬಂದಿದ್ದರು. ಇವರೆಲ್ಲರಿಗೂ ನಮ್ಮ ನೆಚ್ಚಿನ ಶಿಕ್ಷಕರಾದ ಶ್ರೀ ಭಾಸ್ಕರ್ ರವರು ವಂದನಾರ್ಪಣೆ ಸಲ್ಲಿಸಿದರು.

– ಸ್ನೇಹ ಎ

1 HEPP ‘N’

This entry was posted in Prerana. Bookmark the permalink.

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s